ಕೋಟ- ಸಾಮೂಹಿಕ ಸತ್ಯನಾರಾಯಣ ಪೂಜೆ,ವಾರ್ಷಿಕ ಮಹಾಸಭೆ,ಪದಪ್ರದಾನ ಸಮಾರಂಭ

0
202

ಕುಂದಾಪುರ ಮಿರರ್ ಸುದ್ದಿ…

ಕೋಟ: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಕೋಟ ಘಟಕ ಹಾಗೂ ಮಹಿಳಾ ಘಟಕದ ಇದರ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ,ಮತ್ತು ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಭಾನುವಾರ ಕೋಟ ಅಮೃತೇಶ್ವರಿ ದೇವಳದ ಸಭಾಂಗಣದಲ್ಲಿ ಭಾನುವಾರ ಜರಗಿತು.

ಕಾರ್ಯಕ್ರಮವನ್ನು ಮೊಗವೀರ ಯುವ ಸಂಘ ಕೋಟ ಘಟಕದ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಉದ್ಘಾಟಿಸಿ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ಸಹಾಯ ಒದಗಿಸುವುದು ಸಂಘಟನೆಗಳು ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಮೊಗವೀರ ಯುವ ಸಂಘಟನೆ ಕಳೆದ ಹಲವಾರು ವರ್ಷಗಳಿಂದ ಸಂಘಟನಾ ಶಕ್ತಿಯಾಗಿಕಾರ್ಯನಿರ್ವಹಿಸುತ್ತಿದೆ.ಇದಕ್ಕೆ ಕೊರೋನಾ ಕಾಲಘಟ್ಟವೇ ಸಾಕ್ಷಿ ಎಂದರಲ್ಲದೆ ರಕ್ತದಾನದಂತಹ ಕಾರ್ಯಕ್ರಮಗಳು ಇಡೀ ಸಮಾಜವನ್ನು ಸಂಘಟನೆಯಲ್ಲಿ ತೋಡಗಿಕೊಳ್ಳುವಂತೆ ಮಾಡಿದೆ.ಸಂಘದ ಜವಾಬ್ದಾರಿ ಇನ್ನಷ್ಟು ಗಟ್ಟಿಗೊಳಿಸಿಕೊಂಡು ಕಾರ್ಯನಿರ್ವಹಿಸಲು ಕರೆಇತ್ತರು.

ಕಾರ್ಯಕ್ರಮದಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಕಲಾವಿದ ಎಂ ಎ ನಾಯ್ಕ್ ಇವರನ್ನು ಸನ್ಮಾನಿಸಲಾಯತು.

ಈ ಸಂದರ್ಭದಲ್ಲಿ ಕೊಲ್ಲೂರು ದೇವಳದ ಟ್ರಸ್ಟಿ ರತ್ನ ಆರ್ ಕುಂದರ್ ಸೇರಿದಂತೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷ ಪದಾಧಿಕಾರಿಗಳನ್ನು ಗೌರವಿಸಲಾಯಿತು.

Click Here

Click Here

ನೂತನ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷರು ಪ್ರಮಾಣವಚನ ಬೋಧಿಸಿದರು.

ಸಭೆಯ ಅಧ್ಯಕ್ಷತೆಯನ್ನು ಮೊಗವೀರ ಯುವ ಸಂಘ ಕೋಟ ಘಟಕದ ಅಧ್ಯಕ್ಷ ಜಯಂತ್ ಅಮೀನ್ ವಹಿಸಿದ್ದರು.

ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ರಾಜೇಂದ್ರ ಹಿರಿಯಡ್ಕ,ಕುಂದಾಪುರದ ಮಾತಾ ಆಸ್ಪತ್ರೆಯ ಮನೋವೈದ್ಯ ಡಾ.ಪ್ರಕಾಶ್ .ಸಿ ತೋಳಾರ್,ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ರವೀಶ್ ಕೊರವಡಿ,ಬಾರಕೂರು ಮೊಗವೀರ ಸಂಯುಕ್ತ ಮಹಾಸಭಾ ಅಧ್ಯಕ್ಷ ಸತೀಶ್ ಅಮೀನ್,ಕೊಲ್ಲೂರು ಮುಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ರತ್ನ ರಮೇಶ್ ವಿ ಕುಂದರ್,ಮೊಗವೀರ ಯುವ ಸಂಘ ನಿಕಟಪೂರ್ವ ಜಿಲ್ಲಾಧ್ಯಕ್ಷ ಶಿವರಾಮ್ ಕೆ.ಎಂ,ಕೋಟ ಘಟಕದ ಮಾಜಿ ಅಧ್ಯಕ್ಷ ಗಿರೀಶ್ ಬಂಗೇರ,ಮೊಗವೀರ ಯುವ ಸಂಘ ಇದರ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಭಾಸ್ಕರ,ನಿಕಟಪೂರ್ವ ಅಧ್ಯಕ್ಷೆ ಗುಲಾಬಿ.ಡಿ.ಬಂಗೇರ,ದ.ಕ ಮೊಗವೀರ ಯುವ ಸಂಘದ ಅಧ್ಯಕ್ಷೆ ಉಷಾರಾಣಿ, ಗೀತಾನಂದ ಫೌಂಡೇಶನ್ ಇದರ ಗೀತಾ ಎ.ಕುಂದರ್, ಮಹಿಳಾ ಘಟಕದ ನಿರ್ಗಮಿತ ಕಾರ್ಯದರ್ಶಿ ಶ್ಯಾಮಲ ಅಶೋಕ್,ಯುವ ಸಂಘಟನೆ ನೂತನ ಅಧ್ಯಕ್ಷ ರಂಜೀತ್ ಕುಮಾರ್ ,ಮಹಿಳಾ ಘಟಕದ ನೂತನ ಅಧ್ಯಕ್ಷೆ ಲಲಿತಾ ಭಾಸ್ಕರ್, ಉಪಸ್ಥಿತರಿದ್ದರು.
ನಿರ್ಗಮಿತ ಕಾರ್ಯದರ್ಶಿ ರಾಘವೇಂದ್ರ ಕುಂದರ್ ವರದಿ ವಾಚಿಸಿದರು.ಕೋಶಾಧಿಕಾರಿ ಸಂದೇಶ್ ಸಾಲಿಯಾನ್ ಲೆಕ್ಕಪತ್ರ ವಾಚಿಸಿದರು.ರವಿಕಿರಣ್ ಕಾಂಚನ್ ಸನ್ಮಾನಪತ್ರ ವಾಚಿಸಿದರು.

ನೂತನವಾಗಿ ಅಧ್ಯಕ್ಷ ರಂಜೀತ್ ಕುಮಾರ್ ಹಾಗೂ ಕಾರ್ಯದರ್ಶಿ ಪ್ರವೀಣ್ ಕುಂದರ್, ಲಲಿತಾ ಭಾಸ್ಕರ್, ನಂದಿನಿ ಸಂತೋಷ್ ಇವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ಕೋಟ ಘಟಕದ ಮಾಜಿ ಕಾರ್ಯದರ್ಶಿ ರಾಘವೇಂದ್ರ ಕುಂದರ್ ವರದಿ ಮಂಡಿಸಿದರು. ಕೋಟ ಘಟಕದ ಸ್ಥಾಪಕಾಧ್ಯಕ್ಷ ಎಂ.ಎಸ್ ಸಂಜೀವ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು. ಮೊಗವೀರ ಯುವ ಸಂಘಟನೆ ಕೋಟ ಘಟಕದ ಮಾಜಿ ಅಧ್ಯಕ್ಷ ಸುರೇಶ್ ಕೆ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here