ಕುಂದಾಪುರ ಮಿರರ್ ಸುದ್ದಿ…
ಕೋಟ: ರಾಷ್ಟ್ರೀಯ ಹೆದ್ದಾರಿ ಕುಂದಾಪುರದಿಂದ ಉಡುಪಿ ತನಕ ದಾರಿ ದೀಪ ಹಾಗೂ ಅಸಮರ್ಪಕ ಕಾಮಗಾರಿ ವಿರುದ್ಧ ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನ ಇದರ ವತಿಯಿಂದ ದೊಂದಿ ಬೆಳಕು ಹಚ್ಚಿ ಪ್ರತಿಭಟಿಸಿದ ಘಟನೆ ಸೋಮವಾರ ನಡೆದಿದೆ.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಸನಿಹ ಎರಡು ದಿಕ್ಕಿನಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ ನಾಯರಿ ದೊಂದಿ ಬೆಳಕು ಹಚ್ಚುವುದರ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ಕಳೆದ ಎರಡು ತಿಂಗಳ ಹಿಂದೆ ದಾರಿ ದೀಪ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ನವಯುಗ ಕಂಪನಿಗೆ ಎಚ್ಚರಿ ನೀಡಿಯಾಗಿಯೂ ಸಮಸ್ಯೆ ಬಗ್ಗೆ ಬಗೆಹರಿಸಿಲ್ಲ ಅಲ್ಲದೆ ಇದರಿಂದ ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚಾಗಿದ್ದು ನವಯುಗ ಕಂಪನಿ ನಿರ್ಲಕ್ಷ್ಯ ತೋರುತ್ತಿದೆ ಈ ಬಗ್ಗೆ ಇಂದು ಸಾಂಕೇತಿಕವಾಗಿ ಪ್ರತಿಭಟಿಸಿದ್ದೇವೆ ಮುಂದಿನ ಒಂದು ವಾರದಲ್ಲಿ ದಾರಿದೀಪ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಯದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹೆದ್ದಾರಿ ಜಾಗೃತಿಸಮಿತಿ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ, ಹೋರಾಟ ಸಮಿತಿ ಪ್ರಮುಖರಾದ ನಾಗರಾಜ್ ಗಾಣಿಗ, ಅಚ್ಯುತ್ ಪೂಜಾರಿ, ಸಂದೀಪ್ ಕುಂದರ್, ಸಮತಾ ಸುರೇಶ್, ರಮೇಶ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.