ಕುಂದಾಪುರ ಮಿರರ್ ಸುದ್ದಿ…
ಕೋಟ: ಬ್ರಹ್ಮಾವರ ತಾಲೂಕು ಪ್ರಾಥಮಿಕ ಹಾಲು ಉತ್ಪದಕರ ನೌಕರರ ಒಕ್ಕೂಟದ ಅಧ್ಯಕ್ಷರಾಗಿ ಸುಜಾತ ಬಾಯಾರಿ ಪುನರಾಯ್ಕೆಯಾಗಿದ್ದಾರೆ.
ಪ್ರಸ್ತುತ ಹಂದಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ, ಅವಿಭಜಿತ ಜಿಲ್ಲೆಗಳ ನೌಕರರ ಒಕ್ಕೂಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಘದ ಇತರ ಪದಾಧಿಕಾರಿಗಳಾಗಿ ಕಾರ್ಯದರ್ಶಿಯಾಗಿ ರಾಕೇಶ್ ನಾಯ್ಕ ಎತ್ತಿನಟ್ಟೆ ಹಾಗೂ ಉಪಾಧ್ಯಕ್ಷರಾಗಿ ಸವಿತಾ. ಕೆ ಕಾರ್ಖಾಡ. ಕೋಶಾಧಿಕಾರಿಯಾಗಿ ಸುರೇಶ ಮರಕಾಲ ಮಾನ್ಯ ಆಯ್ಕೆಯಾಗಿದ್ದಾರೆ.