ಕುಂದಾಪುರ :ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕುಂದಾಪುರ – ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ ಕ್ರೀಡಾಂಗಣದ ಭೂಮಿ ಪೂಜೆ

0
345

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕರ್ನಾಟಕ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಮಲ್ಲೇಶ್ವರಂ ಬೆಂಗಳೂರು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ ಕುಂದಾಪುರ ಇದರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 08, 09 ಮತ್ತು 10ರಂದು ಆಯೋಜನೆ ಗೊಂಡಿರುವ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದ ಕ್ರೀಡಾಂಗಣ ಭೂಮಿ ಪೂಜೆಯನ್ನು ಡಿಸೆಂಬರ್ 01ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ನೆರವೆರಿಸಲಾಯಿತು.

ಊರಿನ ಪುರೋಹಿತರಾದ ಶಂಕರನಾರಾಯಣ ಉಡುಪ ಅವರ ನೇತೃತ್ವದಲ್ಲಿ ನಡೆದ ಭೂಮಿ ಪೂಜೆಯಲ್ಲಿ ಉಪಸ್ಥಿತರಿದ್ದ ಎಂ.ಎಂ.ಹೆಗ್ಡೆ ಎಜುಕೇಶನಲ್ ಆಂಡ್ ಚಾರಿಟೆಬಲ್ ಟ್ರಸ್ಟ್‌ನ ಅದ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಅವರು ಮಾತನಾಡಿ ಸಂಸ್ಥೆಯು ಸರ್ಕಾರದ ಬದಲು ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿದ ಜವಾಬ್ದಾರಿಯನ್ನು ಸ್ವೀಕರಿಸಿ ಕಳೆದ ಕೆಲವು ದಿನಗಳಿಂದ ಸಿದ್ಧತೆ ಆರಂಭಿಸಿದೆ. ಆ ನಿಟ್ಟಿನಲ್ಲಿ ಇವತ್ತು ದೇವರ ಪ್ರಾರ್ಥನೆಯೊಂದಿಗೆ ಮುಂದುವರೆದಿದೆ ಎಂದರು.

Click Here

ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅದ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ಮಾತಾನಾಡುತ್ತಾ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದ ಆಯೋಜನೆ ನಮ್ಮ ಕಾಲೇಜಿಗೆ ಒದಗಿ ಬಂದಿರುವುದು ಒಂದು ಸುವರ್ಣ ಅವಕಾಶವಾಗಿದೆ. ಅದನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಲು ಪಣ ತೋಟ್ಟಿದ್ದೆವೆ ಎಂದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಮತ್ತು ಖಜಾಂಚಿ ಭರತ್ ಶೆಟ್ಟಿ ಉಪಸ್ಥಿತರಿದ್ದರು ಶುಭ ಕೋರಿದರು.

Click Here

LEAVE A REPLY

Please enter your comment!
Please enter your name here