ಕುಂದಾಪುರ :ಕಲಾರಾಧನೆಯಲ್ಲಿ ಸೌಂದರ್ಯಾನುಭೂತಿ : ವಿದ್ವಾನ್ ರವಿಕಿರಣ್ ಮಣಿಪಾಲ್

0
240

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಡಿಸೆಂಬರ್ 2ರಂದು ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸ್ತ್ರೀಯ ಸಂಗೀತ ಕಲಾವಿದ ವಿದ್ವಾನ್ ರವಿಕಿರಣ್ ಮಣಿಪಾಲ ಅವರು ಜೀವನದ ಸಂತೋಷಕ್ಕೆ ಕಲೆ ಸಾಹಿತ್ಯ ಸಂಗೀತ ಬೇಕು. ಕಲೆಯ ಆರಾಧನೆಯಲ್ಲಿ ಸೌಂದರ್ಯದ ಅನುಭವ ಆಗುತ್ತದೆ. ಕಲೆಯಲ್ಲಿ ಬದುಕಿನ ಎಲ್ಲಾ ಸಂಘರ್ಷ ಮತ್ತು ಸಮಾಧಾನವನ್ನು ತಂದುಕೊಳ್ಳಬಹುದು ಮತ್ತು ಕಾಣಬಹುದಾಗಿದೆ. ಕಲೆ ಅಂದರೆ ಸಂಗೀತ ಸಾಹಿತ್ಯ, ನಾಟಕ, ಚಿತ್ರಕಲೆ, ಕರಕುಶಲ ಕಲೆಗಳು ಹೀಗೆ ಹಲವು ಇವೆ. ಮಾನವೀಯತೆಯನ್ನು ಕಲೆಯ ಮೂಲಕ ಪ್ರಸ್ತುತಪಡಿಸಬಹುದು. ಬದುಕಿನ ನೋವು ನಲಿವುಗಳನ್ನು, ಹತಾಶೆ ಆತಂಕದ ಸಂಗತಿಗಳನ್ನು ಕಲೆಯ ಮೂಲಕ ಪ್ರಸ್ತುತಪಡಿಸಬಹುದು. ಇದರಿಂದ ಮೌಲ್ಯ, ಸಂದೇಶ, ಸಮಾನತೆ ಸಾಮಾಜಿಕ ತುಮುಲಗಳನ್ನು ತೋರಿಸಲು ಸಾಧ್ಯವಾಗುತ್ತದೆ. ಕಲೆಯಲ್ಲಿ ಕ್ರಾಂತಿ ಮಾಡಬಹುದು. 12ನೇ ಶತಮಾನದ ವಚನಸಾಹಿತ್ಯ ಅದಕ್ಕೆ ಉತ್ತಮ ಉದಾಹರಣೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥರಾದ ಶಾಂತಾರಾಮ್ ಅವರು ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ.ಗೊಂಡ, ಕಾರ್ಯಕ್ರಮ ಸಂಯೋಜಕ ಶಶಾಂಕ್ ಪಟೇಲ್ ಉಪಸ್ಥಿತರಿದ್ದರು.

ಸುಮಾರು 7 ಸಂಗೀತ ವಿಭಾಗದಲ್ಲಿ ಸಂಗೀತ ಸ್ಪರ್ಧೆಗಳು ನಡೆದವು.

Click Here

ಸಂಗೀತ ಸ್ಪರ್ಧೆಗಳ ಫಲಿತಾಂಶ: 

1. ಶಾಸ್ತ್ರೀಯ ಹಾಡುಗಾರಿಕೆ: ಪ್ರಥಮ- ಮಂಗಳೂರಿನ ಸೇಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜು,
ದ್ವಿತೀಯ- ಉಡುಪಿಯ ಮಹಾತ್ಮ ಗಾಂಧಿ ಕಾಲೇಜು
ತೃತೀಯ- ಗಂಗೊಳ್ಳಿಯ ಎಸ್.ವಿ ಪದವಿ ಪೂರ್ವ ಕಾಲೇಜು

2.ಶಾಸ್ತ್ರೀಯ ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ: ಕಾರ್ಕಳದ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು
ದ್ವಿತೀಯ : ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜು, ತೃತೀಯ: ಉಡುಪಿಯ ಮಹಾತ್ಮ ಗಾಂಧಿ ಕಾಲೇಜು
ದಾಸ ಕೀರ್ತನೆ ಸ್ಪರ್ಧೆಯಲ್ಲಿ ಪ್ರಥಮ: ವಾಮಂಜೂರಿನ ಸೇಂಟ್ ಜೋಸೆಫ್ ಎಂಜಿನೀಯರಿಂಗ್ ಕಾಲೇಜು
ದ್ವಿತೀಯ: ಮಂಗಳೂರಿನ ಸೇಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜು,
ತೃತೀಯ: ಗಂಗೊಳ್ಳಿಯ ಎಸ್.ವಿ ಪದವಿ ಪೂರ್ವ ಕಾಲೇಜು
ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಥಮ: ಕಾರ್ಕಳದ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು
ದ್ವಿತೀಯ: ಕುಂದಾಪುರದ ಭಂಡಾರ್ಕಾರ್ಸ್ ಪದವಿ ಕಾಲೇಜು, ತೃತೀಯ: ಉಡುಪಿಯ ಪೂರ್ಣಪ್ರಜ್ಞ ಪದವಿ ಕಾಲೇಜು.
ಕನ್ನಡ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ: ಉಡುಪಿಯ ಮಹಾತ್ಮ ಗಾಂಧಿ ಕಾಲೇಜು, ದ್ವಿತೀಯ: ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು, ತೃತೀಯ: ಕಾರ್ಕಳದ ಶ್ರೀ ಭುವನೇಂದ್ರ ಪದವಿ ಕಾಲೇಜು.
ಕನ್ನಡ ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ: ಉಡುಪಿಯ ಪೂರ್ಣಪ್ರಜ್ಞ ಪದವಿ ಕಾಲೇಜು. ದ್ವಿತೀಯ: ಉಡುಪಿಯ ಮಹಾತ್ಮ ಗಾಂಧಿ ಕಾಲೇಜು, ತೃತೀಯ:ಕುಂದಾಪುರದ ಭಂಡಾರ್ಕಾರ್ಸ್ ಪದವಿ ಕಾಲೇಜು,
ಚಿತ್ರಗೀತೆ ಸ್ಪರ್ಧೆಯಲ್ಲಿ ಪ್ರಥಮ :ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು,
ದ್ವಿತೀಯ: ಕುಂದಾಪುರದ ಬಿ.ಬಿ.ಹೆಗ್ಡೆ ಪದವಿ ಕಾಲೇಜು, ತೃತೀಯ: ಉಡುಪಿಯ ಮಹಾತ್ಮ ಗಾಂಧಿ ಕಾಲೇಜು,
ಸಮಗ್ರ ಪ್ರಶಸ್ತಿಯನ್ನು ಉಡುಪಿಯ ಮಹಾತ್ಮ ಗಾಂಧಿ ಕಾಲೇಜು ಪಡೆಯಿತು.

ಸಂಗೀತ ಸ್ಪರ್ಧೆಗಳ ತೀರ್ಪುಗಾರರಾಗಿ ಗಣೇಶ್ ಗಂಗೊಳ್ಳಿ, ಅಶ್ವಿನಿ, ಶೃತಿ ಕಾಶಿ, ಶಾರದಾ ಹೊಳ್ಳ, ಪಾಳಿಗಾರು ಲಕ್ಷ್ಮಿನಾರಾಯಣ ಉಪಾಧ್ಯಾಯ ಮತ್ತು ಶೃದ್ಧಾ ಆಗಮಿಸಿದ್ದರು.

ಡಿಸೆಂಬರ್ 5ರಂದು ನಡೆಯಲಿರುವ “ಸಂಸ್ಥಾಪಕರ ದಿನಾಚರಣೆ” ಯಂದು ಬಹುಮಾನವನ್ನು ನೀಡಲಾಗುವುದು.

Click Here

LEAVE A REPLY

Please enter your comment!
Please enter your name here