ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಕನ್ನಡ ಮಾಧ್ಯಮದ ಬಗ್ಗೆ ತಾತ್ಸಾರ ಪಡಬೇಡಿ. ಮಕ್ಕಳಿಗೆ ಸಂಸ್ಕಾರ, ದೇಶ ಭಕ್ತಿಯನ್ನು ಕನ್ನಡ ಮಾಧ್ಯಮಗಳು ನೀಡುತ್ತವೆ. ಹುಟ್ಟೂರಿಗೆ ಎನಾದರು ಕೊಡುಗೆ ನೀಡಿ ಎಂದು ಕೋಡಿ ಕನ್ಯಾಣ ಶಾಲಾ ಸ್ಥಾಪಕರಲ್ಲಿ ಒಬ್ಬರಾದ
ಡಾ.ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಹೇಳಿದರು.
ಅವರು ಕೋಡಿ ಕನ್ಯಾಣ ಸೋಮ ಬಂಗೇರ ಸರಕಾರಿ ಪ್ರೌಢಶಾಲೆ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಊರಿಗೆ ಶಿಕ್ಷಣ ಸಂಸ್ಥೆಯನ್ನು ಕೊಡುಗೆಯಾಗಿ ನೀಡಿದರೆ ಅತ್ಯಂತ ಶ್ರೇಷ್ಠ ಕೊಡುಗೆಯಾಗಲಿದೆ. ಕೋಡಿ ಕನ್ಯಾಣದಲ್ಲಿ ಪ್ರೌಢಶಾಲಾ ಸ್ಥಾಪನೆಯಲ್ಲಿ ಜಿ. ಶಂಕರ್ ಅವರ ಕೊಡುಗೆ ಮಹತ್ವದ್ದು ಎಂದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮ ಉದ್ಘಾಟಿಸಿ, ಕೋಡಿಕನ್ಯಾಣದ ಜನತೆ ದಾನಿಗಳ ಸಹಕಾರ ಪಡೆದು ಉತ್ತಮ ಶಿಕ್ಷಣ ಸಂಸ್ಥೆ ಕಟ್ಟಿಬೆಳೆಸಿದ್ದಾರೆ ಎಂದರು.
ಕೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಮೆಂಡನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯಕ್ಷಗಾನ ಗುರು ಎಂ.ಎಚ್. ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಾಗರಾಜ್ ಗಾಂವ್ಕರ್, ವೇದಾವತಿ, ಶ್ರೀಕಾಂತ್ ಹೆಗ್ಡೆ, ಜೋಸ್ನಾ ಪೈ, ಗೀತಾ ಕುಂದರ್, ಜಿ. ನಾಗ, ಪ್ರಕಾಶ್ ಎಂ. ಶಿರಾಳಿ, ಬಿ.ಬಿ. ಗಾಂವ್ಕರ್, ರಾಮಕೃಷ್ಣ ನಾಯ್ಕ್, ಸುಬ್ರಹ್ಮಣ್ಯ, ಸದಾನಂದ ಶೆಟ್ಟಿ, ಹೇಮಾವತಿ ಎಸ್., ಸುಬ್ರಾಯ ಮಯ್ಯ, ಚಂದ್ರಕಲಾ, ಪುರುಷೋತ್ತಮ ಕಾಮತ್,
ಮುಖ್ಯ ಶಿಕ್ಷಕಿ ರಾಧಿಕಾ, ನಿವೃತ್ತ ಹೊಸ್ತಿಲಲ್ಲಿರುವ ಶಿಕ್ಷಕಿ ಶಶಿಕಲಾ, ಉಡುಪಿ ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ
ಅವರಿಗೆ ಗುರುವಂದನೆ ಸಲ್ಲಿಸಲಾಯಿತು..
ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಧು ಬಿ.ಇ., ಪ್ರೌಢಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀನಿವಾಸ ಬಂಗೇರ, ಗ್ರಾ.ಪಂ. ರವೀಂದ್ರ ರಾವ್, ಸ್ಥಳ ದಾನಿಗಳಾದ ಮಾಧವ ಉಪಾಧ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಕಾಂಚನ್, ಪ.ಪೂ. ಪ್ರಭಾರ ಪ್ರಾಂಶುಪಾಲ ರಾಘವೇಂದ್ರ ಕೆ., ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕಿ ಸಂಪಾ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ರಾಧಿಕಾ ಸ್ವಾಗತಿಸಿ, ಸುಜಾತ ಬಾಯರಿ, ಶಿಕ್ಷಕಿ ಅನಿತಾ ಶೆಟ್ಟಿ, ನಳಿನಿ ಭಟ್ ನಿರೂಪಿಸಿ, ಹಳೆ ವಿದ್ಯಾರ್ಥಿ ಸಂಘದ ರಾಘವೇಂದ್ರ ಕರ್ಕೇರ ಸಮ್ಮಾನಿತರನ್ನು ಪರಿಚಯಿಸಿ, ಶಿಕ್ಷಕ ದಿನಕರ ಶೆಟ್ಟಿ ವಂದಿಸಿದರು.