ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಪಂಚವರ್ಣ ಯುವಕ ಮಂಡಲ ಕೋಟ ಇದರ ನೂತನ ಅಧ್ಯಕ್ಷರಾಗಿ ಅಜಿತ್ ಆಚಾರ್ಯ ಕೋಟ ಹಾಗೂ ಕಾರ್ಯದರ್ಶಿಯಾಗಿ ಸುಧೀಂದ್ರ ಜೋಗಿ ಆಯ್ಕೆಯಾಗಿದ್ದಾರೆ.
ಗುರುವಾರ ಕೋಟದ ರಾಜಶೇಖರ ದೇವಳದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ನೂತನ ಪದಾಧಿಕಾರಿಗಳಾಗಿ ಸ್ಥಾಪಕಾಧ್ಯಕ್ಷರಾಗಿ ಸುರೇಶ್ ಗಾಣಿಗ, ಗೌರವಾಧ್ಯಕ್ಷರಾಗಿ ಸತೀಶ್ ಹೆಚ್ ಕುಂದರ್, ಕಾರ್ಯಾಧ್ಯಕ್ಷರಾಗಿ ರವೀಂದ್ರ ಕೋಟ, ಸಂಚಾಲಕರಾಗಿ ಅಮೃತ್ ಜೋಗಿ , ಉಪಾಧ್ಯಕ್ಷರಾಗಿ ಮನೋಹರ್ ಪೂಜಾರಿ , ರವೀಂದ್ರ ಜೋಗಿ, ಸಂತೋಷ್ ಪೂಜಾರಿ, ಜೊತೆಕಾರ್ಯದರ್ಶಿಯಾಗಿ ಸಂದೇಶ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಶಿಧರ ತಿಂಗಳಾಯ, ಕ್ರೀಡಾಕಾರ್ಯದರ್ಶಿಯಾಗಿ ನಿತೀನ್ ಕುಮಾರ್ ಕೋಟ, ಕೋಶಾಧಿಕಾರಿಯಾಗಿ ನಾಗರಾಜ್ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಗಿರೀಶ್ ಆಚಾರ್ಯ, ಗೌರವ ಸಲಹೆಗಾರರಾಗಿ ಚಂದ್ರ ಪೂಜಾರಿ ಕದ್ರಿಕಟ್ಟು, ನರಸಿಂಹ ಗಾಣಿಗ, ರಾಘವೇಂದ್ರ ಗಾಣಿಗ, ಕೆ.ವೆಂಕಟೇಶ್ ಪ್ರಭು, ಚಂದ್ರ ಆಚಾರ್ಯ, ಉಮೇಶ್ ಪ್ರಭು ಆಯ್ಕೆಯಾಗಿದ್ದಾರೆ. ಹಾಗೂ ಇತರ ಸದಸ್ಯರು ಇದ್ದರು.