ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಛಾಯಾಗ್ರಾಹಕ ಸಂತೋಷ್ ಕುಂದೇಶ್ವರ್ ಅವರಿಗೆ ಸನ್ಮಾನ

0
378

ಕುಂದಾಪುರ ಮಿರರ್ ಸುದ್ದಿ…
ಗಂಗೊಳ್ಳಿ :
ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಸಂತೋಷ್ ಕುಂದೇಶ್ವರ್ ಅವರನ್ನು ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಮಂಗಳವಾರ ಸನ್ಮಾನಿಸಿ ಗೌರವಿಸಲಾಯಿತು.

ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ. ಅವರು ಸಂತೋಷ ಕುಂದೇಶ್ವರ ಅವರನ್ನು ರೋಟರಿ ಕ್ಲಬ್ ಪರವಾಗಿ ಗೌರವಿಸಿದರು.

Click Here

Click Here

ರೋಟರಿ ವಲಯ ಸೇನಾನಿ ಕೆ.ರಾಮನಾಥ ನಾಯಕ್, ಗಂಗೊಳ್ಳಿ ರೋಟರಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಸದಸ್ಯ ಕೃಷ್ಣ ಪೂಜಾರಿ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ನಾರಾಯಣ ನಾಯ್ಕ ವಂದಿಸಿದರು.

Click Here

LEAVE A REPLY

Please enter your comment!
Please enter your name here