ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ(ವ್ಯವಹಾರ ದಿನ) 2022

0
301

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಇಂದಿನ ದಿನಗಳಲ್ಲಿ ಹೊಸದಾಗಿ ಶಾಲಾ ಸಂಸ್ಥೆಗಳು ಹುಟ್ಟಿಕೊಳ್ಳುತ್ತದೆ. ಆದರೆ ಬಹುತೇಕ ಶಿಕ್ಷಣ ಸಂಸ್ಥೆಗಳು ಉದ್ಯಮವಾಗುತ್ತಿರುವುದರ ನಡುವೆ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಜಿಲ್ಲೆಗೆ ಸಿಮೀತವಾಗದೆ ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ ಎಂದು ಉದ್ಯಮಿ ಆನಂದ ಸಿ ಕುಂದರ್ ಹೇಳಿದರು.

ಅವರು ಬುಧವಾರ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ “ವ್ಯವಹಾರ ದಿನ – ಜನತಾ ಆವಿಷ್ಕಾರ 2022” (Business Day) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್. ಸಿ ಮತ್ತು ಪಿಯುಸಿ ಪ್ರಮುಖ ಘಟ್ಟ, ಒಳ್ಳೆಯ ಶಿಕ್ಷಣ ಪಡೆದು ನಮ್ಮ ಜೀವನದಲ್ಲಿ ನಮ್ಮ ಗುರಿ, ಉದ್ದೇಶ, ಹೊಂದಿರಬೇಕು. ಶಿಕ್ಷಣದ ಜೊತೆ ಜೀವನದ ಮೌಲ್ಯಗಳನ್ನು ರೂಪಿಸಿಕೊಳ್ಳಬೇಕು ಎಂದರು.

Click Here

ಈ ಸಂದರ್ಭ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜನತಾ ಫಿಶ್ ಮಿಲ್ ಆಡಳಿತ ನಿರ್ದೇಶಕ ಆನಂದ್ ಸಿ.ಕುಂದರ್, ಅರೇಕಾ ಚಹಾದ ಮೂಲಕ ಪ್ರಸಿದ್ಧಿ ಪಡೆದಿರುವ ಉದ್ಯಮಿ ನಿವೇದನ್ ನೆಂಪೆ, ಎನ್.ಡಿ. ಪೇಪರ್ ಯುಎಸ್.ಎ ಉದ್ಯಮಿ ಉದಯ ಪೂಜಾರಿ, ಶಂಕರ್ ಹೆಗ್ಡೆ ಹಾಗೂ ಉದ್ಯಮಿ ಗೋವಿಂದ ಬಾಬು ಪೂಜಾರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಗಣೇಶ್ ಮೊಗವೀರ ಮಾತನಾಡಿ, ವ್ಯವಹಾರದಲ್ಲಿ ಬಂದಂತಹ ಲಾಭಾಂಶದ ಹಣವನ್ನು ಬೈಂದೂರು ಹಾಗೂ ಕುಂದಾಪುರ ವಲಯದ ಪ್ರೌಢಶಾಲೆಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜನ್ನಾಡಿ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಶಂಕರ್ ಹೆಗ್ಡೆ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಶೈಕ್ಷಣಿಕ ಸಲಹೆಗಾರ್ತಿ ಚಿತ್ರಾ ಕಾರಂತ, ಜನತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ, ಉಪಪ್ರಾಶುಂಪಾಲ ರಮೇಶ್ ಪೂಜಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸ್ಟಾಲ್ ಗಳನ್ನು ರಚಿಸಿ ವ್ಯವಹಾರ ನಡೆಸಿದರು.

ವಾಣಿಜ್ಯ ವಿಭಾಗದ ಉಪನ್ಯಾಸಕ ಹರ್ಷ ಶೆಟ್ಟಿ ಸ್ವಾಗತಿಸಿ, ಪ್ರತಾಪ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಅಭಿಜಿತ್ ವಂದಿಸಿದರು.

Click Here

LEAVE A REPLY

Please enter your comment!
Please enter your name here