ಬೈಂದೂರು : ಪುರಭವನದಿಂದ ಗಾಂಧೀ ಮೈದಾನಕ್ಕೆ ತೊಂದರೆಯಾಗದು – ಬಾಬು ಶೆಟ್ಟಿ ಸುದ್ಧಿಗೋಷ್ಟಿ

0
229

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಇಲ್ಲಿನ ಗಾಂಧಿ ಮೈದಾನವು ಮಿಲಿಟರಿ ಗ್ರೌಂಡ್ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಪುರಭವನ ನಿರ್ಮಾಣದಿಂದ ಪ್ರಸ್ತುತ ಮೈದಾನದಲ್ಲಿ ನಡೆಯುತ್ತಿರುವ ಯಾವ ಚಟುವಟಿಕೆಗೂ ತೊಂದರೆಯಾಗುವುದೂ ಇಲ್ಲ. ಬಳಕೆಯಾಗದ ಮೈದಾನದ ಒಂದು ಭಾಗದಲ್ಲಷ್ಟೇ ಸಾರ್ವಜನಿಕರಿಗೆ ಉಪಯೋಗವಾಗಲಿರುವ ಪುರಭವನ ನಿರ್ಮಾಣವಾಗಲಿದೆ. ಸ್ಥಳಕ್ಕೆ ಬಂದು ವಾಸ್ತವಾಂಶ ಅರಿಯದೇ ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಜಿಪಂ ಮಾಜಿ ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು.

Click Here

ಅವರು ಬೈಂದೂರಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ 3.48 ಎಕ್ರೆ ಜಾಗ ಕ್ರೀಡಾ ಇಲಾಖೆ & 1.50 ಎಕ್ರೆ ನಗರಾಭಿವೃದ್ಧಿ ಇಲಾಖೆಗೆ ಈಗಾಗಲೇ ಹಸ್ತಾಂತರವಾಗಿದೆ. 4.95 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ಪುರಭವನ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಆರಂಭವಾಗಲಿದೆ. ಕ್ರೀಡಾ ಇಲಾಖೆಯ ಮೂಲಕ ಮೈದಾನ ಅಭಿವೃದ್ಧಿಗಾಗಿ ಪ್ರತ್ಯೇಕ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಅನುದಾನ ಮಂಜೂರಾಗುವುದು ಬಾಕಿ ಇದೆ ಎಂದರು.
ಮಾಜಿ ತಾಪಂ ಸದಸ್ಯ ಸದಾಶಿವ ಡಿ ಪಡುವರಿ ಮಾತನಾಡಿ ಸಾರ್ವಜನಿಕರ ಉಪಯೋಗಕ್ಕೆ ಬಾರದ ಜಾಗದಲ್ಲಿ ಪುರಭವನ ನಿರ್ಮಿಸಿ ಪ್ರಯೋಜನವೂ ಇಲ್ಲ. ನಾವೆಲ್ಲರೂ ಗಾಂಧಿ ಮೈದಾನದಲ್ಲಿ ಆಡಿ ಬೆಳೆದವರು. ಮೈದಾನದ ಯಾವ ಭಾಗ ಉಪಯೋಗವಾಗುತ್ತಿದೆ ಎಂಬ ಅರಿವೂ ಎಲ್ಲರಿಗೂ ಇದೆ. ಯಾರೋ ನಾಲ್ಕು ಮಂದಿ ಮಾಡುತ್ತಿರುವ ವಿರೋಧವನ್ನು ಸಾರ್ವಜನಿಕರ ಅಭಿಪ್ರಾಯದಂತೆ ಬಿಂಬಿಸುವುದು ಸರಿಯಲ್ಲ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಜಿಪಂ ಮಾಜಿ ಸದಸ್ಯ ಸುರೇಶ್ ಬಟವಾಡಿ, ತಾಪಂ ಮಾಜಿ ಸದಸ್ಯರಾದ ಪುಪ್ಪರಾಜ್ ಶೆಟ್ಟಿ, ಪ್ರಸನ್ನ ಕುಮಾರ್ ಉಪ್ಪುಂದ, ಗೋವಿಂದ ಮಟ್ನಕಟ್ಟೆ, ಗಣೇಶ್ ಕಾರಂತ್, ನಾಗರಾಜ ಯಡ್ತರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here