ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು ಬಾರಕೂರು ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವ ಡಿ.16ರಂದು ಆರಂಭಗೊಂಡಿತು. ಡಿ.20ರ ತನಕ ಜಾತ್ರಾ ಮಹೋತ್ಸವ ನಡೆಯಲಿದೆ.
ಡಿ16ರಂದು ರಾತ್ರಿ 10 ಗಂಟೆಗೆ ಕೆಂಡಸೇವೆ ನಡೆಯಿತು. ಡಿ.17ರಂದು ಬೆಳಿಗ್ಗೆ 9 ಗಂಟೆಯಿಂದ ಮಹಾಮಂಗಳಾರತಿ, ಪರಿವಾರ ದೇವರುಗಳ ನೃತ್ಯಸೇವೆ, ತುಲಾಭಾರಾದಿ ಹರಕೆಗಳು ನಡೆದವು.
Video :
ಡಿ.18ರಂದು ಬೆಳಿಗ್ಗೆ 9 ಗಂಟೆಯಿಂದ ಮಹಾಮಂಗಳಾರತಿ, ಪರಿವಾರ ದೇವರುಗಳ ನೃತ್ಯಸೇವೆ, ತುಲಾಭಾರಾದಿ ಹರಕೆಗಳು, ಮಧ್ಯಾಹ್ನ ಮುಳ್ಳುಹಾವಿಗೆ ಪಾದುಕೆ ಪೂಜೆ, ಬೆನಗಲ್ಲು ಪೂಜೆ, ಯೋಗಿ ಪುರುಷರ ದರ್ಶನ, ಬೊಬ್ಬರ್ಯ ದೇವರ ದರ್ಶನ, ಅಜ್ಜಮ್ಮ ದೇವರಿಗೆ ಹೂವು ಅರ್ಪಣೆ, ಡಿ.19ರಂದು ಬೆಳಿಗ್ಗೆ 11 ಗಂಟೆಗೆ ನಾಗದೇವರ ದರ್ಶನ, 12 ಗಂಟೆಗೆ ಮಹಾಪೂಜೆ, ಹಸಲ ದೈವ, ಕೋಳಿಯಾರ ದೈವದ ಪೂಜೆ, ರಾತ್ರಿ9ಕ್ಕೆ ಮಲೆಸಾವಿರ ಮತ್ತು ಪರಿವಾರ ದೈವಗಳ ಕೋಲ ಪ್ರಾರಂಭ, ಡಿ.20ರಂದು ಬೆಳಿಗ್ಗೆ 6 ಗಂಟೆಗೆ ಮಲೆಸಾವಿರ ದೈವ ದರ್ಶನ, 8 ಗಂಟೆಗೆ ಹಾಲಾವಳಿ, ಪರಿವಾರ ದೈವಗಳ ಕೋಲ ನಡೆಯಲಿದೆ.