ಕುಂದಾಪುರ ಮಿರರ್ ಸುದ್ದಿ…
ಕೋಟ : ಇದೇ ಬರುವ ಜ. 14 ರಂದು ಮಣೂರು ಪರಿಸರದಲ್ಲಿ ನಡೆಯುವ ಸ್ಪರ್ಶ – ಹಟ್ಟೂರ ಸನ್ಮಾನ ಹಾಗೂ ಸಾಂಸ್ಕೃತಿಕ, ಸಾಮಾಜಿಕ,ಶೈಕ್ಷಣಿಕ ಪ್ರೋತ್ಸಹಧನ ವಿತರಣೆ ಕಾರ್ಯಕ್ರಮದ ಪ್ರಯುಕ್ತ ಗ್ರಾಮಸ್ಥರಿಗೆ ಆಯೋಜಿಸಿದ ಕ್ರೀಡಾಕೂಟವನ್ನು ಮಣೂರು ಬಾಳೆಬೆಟ್ಟಿನ ನಿವಾಸಿ ಯೋಧ ನಾಯಕ್ ಪವನ್ ಕುಮಾರ್ ಉದ್ಘಾಟಿಸಿ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಈ ರೀತಿ ಊರಿನವರಿಗೆ ಆಯೋಜಿಸಿದ ಕ್ರೀಡಾ ಕೂಟ ನಿಜಕ್ಕೂ ಅರ್ಥಪೂರ್ಣ ಮತ್ತು ನನ್ನ ಹುಟ್ಟೂರಿನಲ್ಲಿ ಈ ರೀತಿ ಒಂದು ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಕವಿತಾ ಎಂಟರ್ ಪ್ರೈಸ್ ಮಾಲಿಕ ಸದಾನಂದ .ಜಿ, ಬ್ರಹ್ಮಾವರ ತಾಲೂಕು ಕ್ರೀಡಾ ಪರಿವೀಕ್ಷಣಾಧಿಕಾರಿ ಹಾಗೂ ದೈಹಿಕ ಶಿಕ್ಷಕ ಗೋಪಾಲ್ ಶೆಟ್ಟಿ , ಕೋಟ ಗ್ರಾಮ ಪಂಚಾಯತ್ ಸದಸ್ಯರಾದ ಶಿವರಾಮ ಶೆಟ್ಟಿ ,ಊರಿನ ಹಿರಿಯರು ಬಾಳೆಬೆಟ್ಟು ಫ್ರೆಂಡ್ಸ್ ನ ಸಕ್ರೀಯ ಸದಸ್ಯರಾದ ರವಿ ಮಯ್ಯ ಹಾಗೂ ಬಾಳೆಬೆಟ್ಟು ಫ್ರೆಂಡ್ಸ್‍ನ ಅಧ್ಯಕ್ಷ ರತ್ನಾಕರ ಪೂಜಾರಿ ಉಪಸ್ಥಿತರಿದ್ದರು.