ಚಿತ್ರಕಲಾವಿದ ಕೋಟ ನಾಗೇಶ್ ಆಚಾರ್ಯ ಅಂತಾಷ್ಟ್ರೀಯ ಮಟ್ಟದ ಸಾಧನೆ

0
192

ಕುಂದಾಪುರ ಮಿರರ್ ಸುದ್ದಿ…

ಕೋಟ : ಇಲ್ಲಿನ ಚಿತ್ರಪಾಡಿಯ ಕಾರ್ತಟ್ಟು ನಿವಾಸಿ ನಾಗೇಶ್ ಆಚಾರ್ಯ ಕೋಟ ಇವರು ಇತ್ತಿಚಿಗೆ ತೆಂಗಿನ ಗರಿಯಲ್ಲಿ ರಚಿಸಿದ ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯ ಕಲಾಕೃತಿಯು ಎಕ್ಸಕ್ಲೂಸಿವ್ ಟ್ಯಾಲೆಂಟ್ ಹಿರಿಮೆಗೆ ಪಾತ್ರರಾಗಿದ್ದಾರೆ.

Click Here

Click Here

ನಾಗೇಶ್ ಆಚಾರ್ಯ ಇವರು ಸ್ವಂತ ಮರದ ಕೆತ್ತನೆಯ ಶಿಲ್ಪಕಲಾ ವೃತ್ತಿಯನ್ನು ನಿರ್ವಹಿಸುತ್ತಿದ್ದು. ತನ್ನ ವೃತ್ತಿ ಬದುಕಿನ ಬಿಡುವಿನ ವೇಳೆಯಲ್ಲಿ ಆಸಕ್ತಿ ಹೊಂದಿದ್ದ ಚಿತ್ರಕಲೆಯನ್ನೇ ನೆಚ್ಚಿನ ಹವ್ಯಾಸವಾಗಿ ಮುಂದುವರಿಸಿಕೊಂಡು ತನ್ನೊಳಗಿನ ಕಲಾ ಕುಸುಮವನ್ನು ಹೊರಜಗತ್ತಿಗೆ ಉಣಬಡಿಸಿದ್ದಾರೆ . ಆರಂಭದ ಕಾಲಘಟ್ಟದಲ್ಲಿ ಪೆನ್ಸಿಲ್ ಆರ್ಟ್ ರಚಿಸುತ್ತಿದ್ದ ಇವರ ಪ್ರತಿಭೆಯು ಮತ್ತಷ್ಟು ಪರಿಪಕ್ವಗೊಳ್ಳುತ್ತ ಪೇಪರ್ ಕಟ್ಟಿಂಗ್ ಆರ್ಟ್ , ಲೀಫ್ ಆರ್ಟ್‍ಗಳಾಗಿ ಮುಂದುವರಿದು ಸಾಕಷ್ಟು ಯಶಸ್ವಿ ಕಲಾಕೃತಿಗಳು ಇವರ ಕರದಿಂದ ರಚಿತಗೊಂಡಿದೆ. ಅಶ್ವಥ ಎಲೆಯಲ್ಲಿ ಹಲವಾರು ಸಾಧಕರ ಚಿತ್ರವನ್ನು , ದೈವ ದೇವರುಗಳ ಚಿತ್ರಕೆಯನ್ನು ರಚಿಸಿದ್ದಾರೆ. ಬಾಳೆ ಎಲೆಯಲ್ಲಿ ವಿಶೇಷವಾಗಿ ರಚಿತಗೊಂಡ ಗಣಪತಿ ಚಿತ್ರಿಕೆ ಹಾಗೂ ಮೊಳೆ ಹಾಗೂ ದಾರದ ಸಹಾಯದಿಂದ ವಿಶೇಷವಾಗಿ ರಚಿಸಲ್ಪಟ್ಟ ಪುನಿತ್ ರಾಜ್ ಕುಮಾರ್ ಅವರ ಚಿತ್ರಿಕೆ ಜನಮನ್ನಣೆಯನ್ನು ಗಳಿಸಿದೆ. ಇತ್ತೀಚಿಗಷ್ಟೆ ತೆಂಗಿನ ಗರಿಯಲ್ಲಿ ಕೇವಲ 9 ನಿಮಿಷಗಳ ಅವಧಿಯಲ್ಲಿ ರಚಿಸಿದ ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯ ಕಲಾಕೃತಿಯನ್ನು ಐ.ಎಸ್.ಓ ದಿಂದ ಪ್ರಮಾಣೀಕೃತ ಗೊಂಡಿರುವ ಎಲ್‍ಬಿ ಎಕ್ಸಕ್ಲೂಸಿವ್ ಅಂಡ್ ಕ್ರಿಯೆಷನ್ ಕೊ.ಎಂಬ ಉತ್ತರ ಪ್ರದೇಶದ ಬರೇಲಿಯಾದ ಸಂಸ್ಥೆಯಿಂದ ಆಯ್ಕೆಗೊಳ್ಳುವ ಪ್ರತಿಷ್ಠಿತ ಎಕ್ಸಕ್ಲೂಸಿವ್ ವರ್ಡ ರೆಕಾರ್ಡ್ಸ್‍ಗೆ ಕಳುಹಿಸಲಾಗಿದ್ದು , ಇವರ ಕಲಾಪ್ರತಿಭೆಯ ನೈಪುಣ್ಯತೆಯನ್ನು ಪರಾಮರ್ಶಿಸಿ ಅರ್ಹವಾಗಿ ಇವರಿಂದ ರಚಿತಗೊಂಡ ಕಲಾಕೃತಿಯು ಎಕ್ಸಕ್ಲೂಸಿವ್ ವರ್ಡ ರೆಕಾರ್ಡ್ಸ್ ಪಟ್ಟಿಗೆ ನಾಮಾಂಕಿತಗೊಂಡಿದೆ.

Click Here

LEAVE A REPLY

Please enter your comment!
Please enter your name here