ಗುಂಡ್ಮಿ- ಕಲೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಆರ್ಥಿಕ ಸಹಾಯ ಅತೀ ಅಗತ್ಯ – ಅನಂತಪದ್ಮನಾಭ ಐತಾಳ್

0
243

ಕುಂದಾಪುರ ಮಿರರ್ ಸುದ್ದಿ…

ಕೋಟ: ಇಂದಿನ ದಿವಸಗಳಲ್ಲಿ ಸಾಂಸ್ಕ್ರತಿಕ ಬೆಳವಣಿಗೆಗೆ ಆರ್ಥಿಕ ಅಡಚಣೆ ಬಹಳಷ್ಟಿದೆ. ಬಲಾಡ್ಯ ಸಂಸ್ಥೆಗಳನ್ನು ಪೋಷಿಸುವವರಿದ್ದಾರೆ, ಆದರೆ ಹಲವಾರು ಸಂಸ್ಥೆಗಳು ಉತ್ತಮ ಕೆಲಸಮಾಡುತ್ತಿದ್ದರೂ, ಆರ್ಥಿಕವಾಗಿ ಹಿಂದುಳಿದಿವೆ. ಇಂತಹ ಕಾಲದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯ ಮಾಡುತ್ತಿರುವುದು ಶ್ಲಾಫನೀಯ. ಕುಂಠತವಾಗುತ್ತಿರುವ ಕಲೆ ಮತ್ತು ಸಾಹಿತ್ಯ ಪ್ರಕಾರಗಳ ಬೆಳವಣಿಗೆಗೆ ಇದು ವರದಾನವಾದೀತೆಂದು ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದ ನಿಕಟ ಪೂರ್ವ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಅಭಿಪ್ರಾಯಪಟ್ಟರು.

Click Here

ಇವರು ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಶ್ರೀ ಮಹಾಗಣಪತಿ ಪ್ರವಾಸೀ ಯಕ್ಷಗಾನ ಮಂಢಳಿಯು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನವನ್ನು ಉದ್ಫಾಟಿಸಿ ಮಾತನಾಡುತ್ತಿದ್ದರು . ಸಭಾ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಂಕರ್ ಕುಂದರ್, ಶ್ರೀನಿಕೇತನ ಪ್ರೌಢಶಾಲೆಯ ಪ್ರಾಧ್ಯಾಪಕರಾದ ಹರಿಕೃಷ್ಟ ಹೊಳ್ಳ, ಕಲಾಕೇಂದ್ರದ ರಾಜಶೇಖರ ಹೆಬ್ಬಾರ್ ಉಪಸ್ಥಿತರಿದ್ದರು. ಭಾಗವತ ರಾಘವೇಂದ್ರ ಮಯ್ಯ ಸ್ವಾಗತಿಸಿ, ಮೇಘಶ್ಯಾಮ ಹೆಬ್ಬಾರ ಕಾರ್ಯಕ್ರಮ ನಿರ್ವಹಣೆಗೈದರು. ವಿನಯಕುಮಾರ್ ಹಟ್ಟಿಯಂಗಡಿ ವಂದನಾರ್ಪಣೆ ಮಾಡಿದರು. ನಂತರ ಶರಸೇತು ಬಂಧನ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

Click Here

LEAVE A REPLY

Please enter your comment!
Please enter your name here