ಕುಂದಾಪುರ: ರಿಂಗ್ ರೋಡ್ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ – ಸಾರ್ವಜನಿಕರ ಕನಸು ನನಸು

0
441

ಕುಂದಾಪುರ ಮಿರರ್ ಸುದ್ದಿ…

Video :

ಕುಂದಾಪುರ: ನಗರದ ಎಲ್ಲ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ಅಭಿವೃದ್ಧಿಗೆ ಗುರುವಾರ ಚಾಲನೆ ದೊರೆಯಿತು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನವಿಯಂತೆ 20 ಕೋ. ರೂ. ಮಂಜೂರಾಗಿ 19.8 ಕೋ. ರೂ. ವೆಚ್ಚದಲ್ಲಿ ಕಾಮಗಾರಿಗೆ ಟೆಂಡರ್ ಆಗಿದ್ದು, ಗುರುವಾರ ಗುದ್ದಲಿ ಪೂಜೆ ನಡೆಯಿತು. ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಮುಖ್ಯಾಧಿಕಾರಿ ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.

Click Here

Click Here

ಬಳಿಕ ಮಾತನಾಡಿದ ಅಧ್ಯಕ್ಷೆ ವೀಣಾ ಭಾಸ್ಕರ್, ಮಹತ್ವಾಕಾಂಕ್ಷಿ ಕುಂದಾಪುರ ನಗರವನ್ನು ಸುತ್ತುವರಿದಿರುವ ಮಹತ್ವಾಕಾಂಕ್ಷೆಯ ರಿಂಗ್ರೋಡ್ ನಾಗರಿಕರ ಪಾಲಿಗೆ ದುರ್ಲಭ ಎಂಬಂತೆ ಭಾಸವಾಗುತ್ತಿತ್ತು. 2006-07ನೇ ಸಾಲಿನಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ದೂರದೃಷ್ಟಿತ್ವದಲ್ಲಿ ಸಾಕಾರಗೊಂಡ ಮಹತ್ವಾಕಾಂಕ್ಷೆಯ ಬೇಡಿಕೆಯಾಗಿದ್ದು, ರಿಂಗ್ ರೋಡ್ ನಿರ್ಮಾಣವಾದರೆ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ನಗರದೊಳಗೆ ಪ್ರವೇಶ ಪಡೆಯದೆ ಕೋಡಿ ಮೊದಲಾದ ಭಾಗಗಳಿಗೆ, ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಹೆದ್ದಾರಿಯಿಂದ ರಿಂಗ್ ರೋಡ್ ಮೂಲಕ ಹೋಗಲು ಸಾಧ್ಯವಿದೆ. ಆದ್ದರಿಂದ ರಿಂಗ್ ರೋಡ್ ನಿರ್ಮಾಣದ ಅವಶ್ಯವನ್ನು ಶಾಸಕರು ಅಂದೇ ಮನಗಂಡಿದ್ದರು. ಇಂದು ಅವರ ಕನಸು ಸಾಕಾರಗೊಂಡಿದೆ ಎಂದರು.

 

ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರು, ಅಧಿಕಾರಿಗಳು, ಸಾರ್ವಜನಿಕರು, ಕುಂದಾಪುರ ಬಿಜೆಪಿ ‌ಮಂಡಳದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಗುತ್ತಿಗೆದಾರರಾದ ಸಂತ ಅಂತೋನಿ ಕನ್ಟ್ರಕ್ಷನ್ ರವಿಕಿರಣ್ ಡಿ’ಕೋಸ್ತ್, ರೋವನ್ ಡಿ’ಕೋಸ್ತ್ ಮೊದಲಾದವರು ಉಪಸ್ಥಿತರಿದ್ದರು.

ರಿಂಗ್ ರಸ್ತೆ ನಿರ್ಮಾಣಕ್ಕೆ ಅನೇಕ ಬಾರಿ ಪ್ರಸ್ತಾವ ಸಲ್ಲಿಸಿದ್ದರೂ ನಾನಾ ಕಾರಣಗಳಿಂದ ಮಂಜೂರಾತಿ ವಿಳಂಬವಾಗುತ್ತಿತ್ತು. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಿಂಗ್ರೋಡ್ ಅನಂತರದ ದಿನಗಳಲ್ಲಿ ನಿರ್ವಹಣೆ ಕಾಣದೆ ವರ್ಷಗಳೇ ಕಳೆದಿದೆ. ಕುಂದಾಪುರದ ಸಂಗಂನಿಂದ ಮೊದಲ್ಗೊಂಡು ಪಂಚ ಗಂಗಾವಳಿ ನದಿ ಪಾತ್ರದಲ್ಲಿ ಹಾದು ಹೋಗುವ ರಿಂಗ್ ರೋಡ್ ಚರ್ಚ್ ರಸ್ತೆಯನ್ನು ಸಂಧಿಸುತ್ತದೆ. ಅಲ್ಲಿಂದ ಕುಂದಾಪುರ ನಗರವನ್ನು ಹತ್ತಿರದಿಂದ ಸಂಧಿಸಬಹುದಾಗಿದೆ.

Click Here

LEAVE A REPLY

Please enter your comment!
Please enter your name here